Saturday, November 5, 2011

ಅವನು

ಇರುಳು ಕವಿದ ಬದುಕಿನಲ್ಲಿ
ಬೆಳದಿಂಗಳು ನೀ ಎಂದುಕೊಂಡೆ
ನನಗೆ ಮರೆತೇ ಹೋಗಿತ್ತು
ನಿನಗೂ ಅಮಾವಾಸ್ಯೆಇದೆ ಎಂದು...

                                     ಕತ್ತಲು ಕತ್ತಲಾಗೆ ಇದ್ದಿದ್ದರೆ
                                     ಚನ್ನಾಗಿರುತ್ತಿತ್ತೊ ಎನೋ?
                                     ಬೆಳಕಿನ ರುಚಿ ತೋರಿಸಿ
                                     ಒಬ್ಬಂಟಿಯಾಗಿ ನನ್ನ ಬಿಡಬಾರದಿತ್ತು ನೀನು...


ನೀ ನನ್ನ ಅಗಲಿದರೂ
ನಾನು ಸಾಯಲಿಲ್ಲ ಎನ್ನುವುದೇನೋ ಖರೆ
ಸತ್ತ ನನ್ನ ಕನಸುಗಳು, ಒಡೆದ ಮನಸ್ಸನ್ನು
ತಂದುಕೊಡಬಲ್ಲೆಯ ದೊರೆ…?

                                    ಈ ಜನ್ಮದಲ್ಲಿ ಸಿಗದ ನೀನು ಮತ್ತಾವ
                                    ಹುಟ್ಟಿನಲ್ಲು ಸಿಗುವುದಿಲ್ಲ ಎಂದು ಅರಿವಾಗಿದೆ
                                   ನಿನ್ನ ಸುಖ ಸಂತೋಷವನ್ನೇ ಬಯಸಿದ ನನಗೆ
                                   ನಿನ್ನ ನೆನಪೆ ಅಪ್ಯಾಯಮಾನವಾಗಿದೆ…
 

Friday, September 24, 2010

hiiiiiiiii

ide modalne sala entered blog site.............. feeling great..............

BELATED HAPPY TEACHER'S DAY TO ALL ...........